ಬಿಗ್ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.
ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ. ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ವಾಂತಿ, ಬೇಧಿಯಿಂದ ಹಲವರು ಮೃತಪಟ್ಟಿದ್ದರು. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಶನಿವಾರ ರಾಹುಲ್ ಗಾಂಧಿ ಅವರು ಭೇಟಿ ಮಾಡಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸರ್ಕಾರ ಇನ್ನು ಇಂದೋರ್‌ನಲ್ಲಿ ಕುಡಿಯುವ ನೀರು ಒದಗಿಸಿಲ್ಲ. ಜನರಿಗೆ ಕುಡಿಯುವ ನೀರು ನೀಡಲಾಗದ ಸ್ಥಿತಿಯೇ ಸ್ಮಾರ್ಟ್‌ಸಿಟಿಯ ಹೊಸ ಮಾದರಿಯೇ ಎಂದು ಕಿಡಿಕಾರಿದರು. ಇನ್ನು ಭಾರತ ತಂಡದ ಶುಭ್ಮಮನ್ ಗಿಲ್ ಅವರು ವಾಟರ್ ಪ್ಯೂರಿಫೈಯರ್ ಅನ್ನು ಪಂದ್ಯದ ವೇಳೆ ತಂದಿದ್ದು ಗಮನ ಸೆಳೆಯಿತು.
ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಜ.22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಧಮ್ಕಿ ಹಾಕಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಡಿಯೊ ಮೂಲಕ ಕ್ಷಮೆ ಕೇಳಿರುವ ರಾಜೀವ್‌ಗೌಡ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.
ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.